Thursday, December 31, 2009

about myself


"NO TIME IS WRONG TO DO THE RIGHT THING"

ಅವಳಿಗಾಗಿ ಕಾಯುತಿದ್ದೆ ನಾ ಅಂದು
ಅವಳಂದುಕೊಂಡಿದ್ದಳು ನನ್ನ ಪ್ರೀತಿ ಸುಳ್ಳೆಂದು
ನನಗಾಗಿ ಕಾಯುತ್ತಾ ಕುಳಿತಿದ್ದಾಳೆ ನನಗಿಂದು
ಅವಳಿಗೇನು ಗೊತ್ತು ತಾನು ನಿಂತಿರುವುದು
ನನ್ನ ಗೋರಿಯ ಮೇಲೆಂದು

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಗೋಲ್ಡನ್ ಸ್ಟಾರ್ ಗಣೇಶ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ.
ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

ಪ್ರಶ್ನೆ 1.) ಹುಟ್ಟಿದ್ದು ? ಊರು ? ಜಿಲ್ಲೆ ?

ಉತ್ತರ :- ಇನ್ನೆಲ್ರಿ ಭೂಮಿ ಮೇಲೆ... ಅಷ್ಟು ಗೊತ್ತಿಲ್ಲ್ವ ...ಊರು ಮುನ್ನೂರು !!!ಜಿಲ್ಲೇ ಒಂದು ಐನೂರು !!! ಇಲ್ಲ ಕಣ್ರೀ ಇನ್ಮೇಲೆ ಹೀಗೆ ನಿಜ ಹೇಳಲ್ಲ. ನಿಮ್ಮ ತಾಳ್ಮೆ ಪರೀಕ್ಷೆ ಮಾಡಲ್ಲ. ನಾನು ಹುಟ್ಟಿದ್ದು ಬೆಳೆದದ್ದು ನಮ್ಮ ಗುಲ್ಬರ್ಗ ಜಿಲೆಯಲ್ಲಿ.

ಪ್ರಶ್ನೆ 2.) ಇಷ್ಟ ಕಷ್ಟ ?

ಉತ್ತರ :- ನೀವು ಅಂದ್ರೆ ತುಂಬಾ ಇಷ್ಟ !!! ನೀವು ನನ್ನ ಸ್ನೇಹ ಒಪ್ಪಲಿಲ್ಲ ಅಂದ್ರೆ ಕಷ್ಟ. ಪ್ರೀತಿಸೋ ಹೃದಯ ಇಷ್ಟ !!! ಆದ್ರೆ ಪ್ರಿತಿಸೋದ ಕಷ್ಟ.

ಪ್ರಶ್ನೆ 3.) ಆಟ ಪಾಠ ?

ಉತ್ತರ :- ಎಲ್ಲಾ ಮುಗಿತು ಕಣ್ರೀ ಚಿಕ್ಕವನಿದ್ದಾಗ ಅಜ್ಜಿ ಊರಲ್ಲಿ ಹುಡುಗಿಯರ ಜೊತೆ ಕಣ್ಣ ಮುಚ್ಚೆ ಆಟ ಅಡ್ತ ಇದ್ದೆ, ಈಗ ಅದೇನೋ ದೊಡ್ಡ ಹುಡ್ಗ ಅಂತೆ ಹಾಗೆಲ್ಲ ಆಟ ಆಡಬೇಡ ಅಂತ ಅಮ್ಮ ಬೈತಾರೆ. ಅದ್ರು ಬಿಟ್ಟಿಲ್ಲ ಕಣ್ರೀ ಸಮಯ ಸಿಕ್ಕಾಗೆಲ್ಲ ಅದೇನೋ ಚೆಸ್,ಬ್ಯಾಟ್ಮಿಂಟನ್,ಕಾರ್ರೊಂ ಅಂತಾರಲ್ಲ ಅವ್ನ ಅಡ್ತಯಿರ್ತೀನಿ.

ಪ್ರಶ್ನೆ 4.) ಹವ್ಯಾಸ ? ಯಾರ ಜೊತೆ ವಾಸ ?

ಉತ್ತರ :- ಸೀಗರೆಟ್ ಸೇದೋದು,ಹಗಲು-ರಾತ್ರಿ ಬರೀ ಬಾರ್ ನಲ್ಲಿ ಇರೋದು,ಕಂಡ ಕಂಡ ಹುಡುಗಿರ್ನ ರೆಗ್ಸೋದು,ನಮ್ಮ ತಾಯಾಣೆ ಮೇಲ್ಕಂಡ ಯಾವುದೇ ಹವ್ಯಾಸ ಇಲ್ಲಾ ರೀ . ಯಾವುದಾದರು ಪುಸ್ತಕ ಓದೋದು, ಚಾಟಿಂಗ್,ಗೇಮ್ಸ್ , ಆಮೇಲೆ...ಮತ್ತೆ....ಏನೋ ಮರೆತೆ ಹ್ಹಾ ಹ್ಹಾ .... ....ರಾತ್ರಿ ಅರ್ಧ ಗಂಟೆ ಹಾಡೆಳೋದು. ಪಾಪ ನನ್ನ ಫ್ರೆಂಡ್ಸ್ ರಾತ್ರಿ ಕಿವಿಗೆ ಹತ್ತಿ ಇಟ್ಟಕೊಂಡು ಮಲಗ್ತಾರೆ. ಗೊತ್ತಾಯ್ತಲ್ಲ ವಾಸ ಫ್ರೆಂಡ್ಸ್ ಜೊತೆ.


ಪ್ರಶ್ನೆ 5.) ಹೆಂಡತಿ ಮಕ್ಕಳು-ಮರಿ ?

ಉತ್ತರ :- ಎಂತಾ ಪ್ರೆಶ್ನೆರಿ ಇದು "ನನಗೆ ಮಕ್ಕಳು-ಮರಿ ಹೆಂಡ್ತಿನಾ" ಹೌದು ಇವು ಎಲ್ಲಿ ಸಿಗ್ತವೆ ನಿಮಿಗೆ ಗೊತ್ತ ,,,,,,.ಇಲ್ಲಾ ರೀ ನಿಮ್ಮ ಆಣೆಗೋ ಅಂತಹ ಯಾವುದೇ ಹಳ್ಳಕ್ಕೆ ಇನ್ನೊ ಬಿದ್ದಿಲ್ಲ.ಅಪ್ಪಟ ಬ್ರಹ್ಮ ಚಾರಿ.

ನೀವು ಕೇಳೋ ಪ್ರೆಶ್ನೆಗೆಲ್ಲ ನನ್ನ ಕೈಯಲ್ಲಿ ಉತ್ತರ ಕೊಡುಕಾಗಲ್ಲ ರೀ,,,,ಒಂದಲ್ಲ ಒಂದಿನ ಎದುರಿಗೆ ಸಿಗ್ತಿರಲ್ಲ ಆವಾಗ ನೀವು ಏನೇ ಕೇಳಿ ಹೇಳ್ತೀನಿ ಓ.ಕೆ.ನಾ ....... ಸರಿ ಕೊನೆಯದಾಗಿ.



ಸ್ನೇಹದಿಂದ
ಸ್ನೇಹಕ್ಕಾಗಿ
ಸ್ನೇಹ ಕೊಟ್ಟು
ಸ್ನೇಹ ಪಡೆಯುವ
ಸ್ನೇಹಿತನಲ್ಲದ ಸ್ನೇಹಿತ
ನಿಮ್ಮ "ಏಕಾಂತ".

No comments:

Post a Comment